ವಚನ - 867     
 
ಮನ ಮಹಾಮಂಗಳವನೈದಿ, ಹಿಂದು ಮುಂದು ಅರತು, ಬಂದ ಬಟ್ಟೆಯ ಮುಚ್ಚಿ ಬಾರದಂತೆ ಹೋದರಯ್ಯಾ ನಿಮ್ಮವರು. ನೀನು ಸಟೆಕಾರ, ನಿನ್ನಿಂದ ಊರು ಹಾಳಾಯಿತ್ತು. ಎನ್ನ ನಿನ್ನವರಂತೆ ಮಾಡಿ, ಅವರ ಸಂಗದೊಳಗೆನ್ನನಿರಿಸಯ್ಯಾ, ಇರಿಸದಿದ್ದಡೆ ನಿನ್ನ ಬಯ್ಯುವುದೆ ಸತ್ಯ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ!