ವಚನ - 886     
 
ಮಾಡಿಸಯ್ಯ ಎನಗೆ ನಿನ್ನವರ ಸಂಗವ, ಮಾಡಿಸಯ್ಯ ಎನಗೆ ನಿನ್ನವರ ಆನಂದವ, ಆಗಿಸಯ್ಯ ನಿನ್ನವರಾದಂತೆ, ನೋಡಿಸಯ್ಯ, ನಿನ್ನವರ ಕೂಡೆ ಸಂಗವನು. ಮಾಡಿಸಯ್ಯ ಎನಗೆ ಬಚ್ಚ ಬರಿಯ ಭಕ್ತಿಯನು. ಕೊಡಿಸಯ್ಯ ಎನಗೆ ಪಾದೋದಕ ಪ್ರಸಾದವನೊಚ್ಚತ. ಸಲಿಸಯ್ಯ ನಿನ್ನವರ ಕೂಡಿ ಸಲಿಕೆಗೆ ಇರಿಸಯ್ಯ ನಿನ್ನವರ ಪಾದದ ಕೆಳಗೆ ನಿತ್ಯನಿತ್ಯನಾಗಿ. ಬರಿಸದಿರಯ್ಯ ಎನ್ನ ಭವಭವದಲ್ಲಿ, ಬರಿಸಿ ಬರಿಸಿ ಕಾಲಕಾಮಂಗೆ ಗುರಿ ನಿಗ್ರಹಕ್ಕೆ. ಕಪಿಲಸಿದ್ಧಮಲ್ಲಿಕಾರ್ಜುನಾ, ಇನಿತನು ಇತ್ತು ಕೆಡಿಸಯ್ಯಾ ಎನ್ನ ಭವದ ಹುಟ್ಟ.