ಮಾಸಿಮಾಸಿದಂತೆ ತೊಳೆದಡೆ
ಶುದ್ಧಮಾಡುವ ಗುಣ ಉದಕವಯ್ಯಾ;
ಶ್ವಾಸಶ್ವಾಸಕ್ಕೆ ಶಾಂತಿಯ ಕೊಡುವ ಗುಣ ಉದಕವಯ್ಯಾ;
ಮಾಡಿದ ಪಾಪವ ಪರಿಹರಿಸುವದೆಂಬುದು ಶಶವಿಷಾಣ;
ನಿಶ್ಚಯ ನೋಡಯ್ಯಾ.
ಅದು ಕಾರಣ, ಇದು ಗಂಗೆಯಹುದು ಶುದ್ಧ ಶಾಂತಿಗೆ;
ಗಂಗೆಯಲ್ಲ ಕರ್ಮಶುದ್ಧಕ್ಕೆ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Māsimāsidante toḷedaḍe
śud'dhamāḍuva guṇa udakavayyā;
śvāsaśvāsakke śāntiya koḍuva guṇa udakavayya;
māḍida pāpava pariharisuvadembudu śaśaviṣāṇa;
niścaya nōḍayya.
Adu kāraṇa, idu gaṅgeyahudu śud'dha śāntige;
gaṅgeyalla karmaśud'dhakke, kapilasid'dhamallikārjunā.