Index   ವಚನ - 908    Search  
 
ಮುನ್ನಾದ ಫಲವನೂ ಇನ್ನು ಸೀಮೆಕ್ಷೇತ್ರದ ಭಕ್ತಿ ಮುನ್ನಿನಂತೆ ಫಲವಾಯಿತೊ ಅಯ್ಯ, ಅಂದಾದಿಯಲ್ಲಿ ಬಸವಣ್ಣ ತಂದಾನು ಹಿಂದು ಮುಂದುಗೆಟ್ಟ ಫಲವಾ ಫಲವೂ ಆ ಫಲವಾದರೆ ಸಫಲವಾಯಿತು ಸದ್ಭಕ್ತಿ ಒಲವಿಂಗೆ ನೀ ಕಪಿಲಸಿದ್ಧಮಲ್ಲಿಕಾರ್ಜುನಾ.