ವಚನ - 909     
 
ಮುನ್ನಾದಿಯಲ್ಲದ ಉನ್ನತ ಜ್ಞಾನವನು ಇನ್ನು ಭೇದಿಸುವರಾರು ಹೇಳಾ ತಂದೆ. ಎನ್ನ ಗುರುವೆ ನಿಮ್ಮ ಸೊಮ್ಮನರಿಯದಾತಂಗೆ ಅರಿಯಲಾಯ್ತು ಕಪಿಲಸಿದ್ಧಮಲ್ಲಿಕಾರ್ಜುನದೇವಾ.