•  
  •  
  •  
  •  
Index   ವಚನ - 915    Search  
 
ಮೂರ್ತಿ ಮೂಲಕ್ಕೆ ತಾನೆ ಮುಖ್ಯನಾದಾತ, ಸಕಲಕ್ಕೆ ತಾನೆ ಕಾರಣಿಕನಾದಾತ, ಸರ್ವವನೂ ತನ್ನೊಳಗಡಗಿಸಿ ಮೀರಲೀಯದಾತ. ಆತನು ಅಜ್ಞಾತನೆಂಬೆ, ಆತನು ಶರಣನೆಂಬೆ, ಆತನು ಸಕಲನಿಷ್ಕಲ ಪರಿಪೂರ್ಣನೆಂದೆಂಬೆ, ಅಚ್ಚಲಿಂಗೈಕ್ಯನೆಂದೆಂಬೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯ ತಾನೆಂಬೆ.
Transliteration Mūrti mūlakke tāne mukhyanādāta, sakalakke tāne kāraṇikanādāta, sarvavanū tannoḷagaḍagisi mīralīyadāta. Ātanu ajñātanembe, ātanu śaraṇanembe, ātanu sakalaniṣkala paripūrṇanendembe, accaliṅgaikyanendembe, kapilasid'dhamallikārjunayya tānembe.