•  
  •  
  •  
  •  
Index   ವಚನ - 928    Search  
 
ಮೂರು ವೃಕ್ಷವು ಶುದ್ಧ, ಆರು ಫಲವೂ ಸಿದ್ಧ, ಆರಾರು ಕೋಟಿಯದು ಪ್ರಸಿದ್ಧದಾ ತೆನೆಗಡದ ಸೀಮೆಯಲಿ, ತನುವಿನ ಮಂಟಪದ ಘನ ಮಸ್ತಕದಲ್ಲಿಪ್ಪ ಹೊಂಗಳಸದಾ ಮೂರು ಮತ್ತೊಂದಾಗಿ ಆರರಾಹುತಿಯಿಂದ ಆರಾರು ಕೋಟಿಯಿಂದತ್ತಲಾಗಿ ಮೀರಿನಿಂದಾ ತ್ವಮಸಿ ಕಪಿಲಸಿದ್ಧಮಲ್ಲಿನಾಥನ ಸಾರಹೃದಯನ ಭಕ್ತಿ ಫಲವಿಂತುಟು.
Transliteration Mūru vr̥kṣavu śud'dha, āru phalavū sid'dha, ārāru kōṭiyadu prasid'dhada tenegaḍada sīmeyali, tanuvina maṇṭapada ghana mastakadallippa hoṅgaḷasada mūru mattondāgi ārārāhutiyinda ārāru kōṭiyindattalāgi mīrinindā tvamasi kapilasid'dhamallināthana sārahr̥dayana bhakti phalavintuṭu.