ವಚನ - 933     
 
ಮೇರುವಿನ ಮಧ್ಯದಲಿ ಓರಂತೆ ಸುಧೆವರಿದು ಆರಾರು ಆರುವರೈ ಅತ್ಯಶಿಷ್ಠ. ಧಾರುಣಿಗೆವರಿಯದಾ ಮೇಲಪ್ಪ ಪಸರದ ಮೂರು ಮಸ್ತಕದಲ್ಲಿ ಅರತು ಅರತ, ಓರಂತೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಅಹೋರಾತ್ರಿಯಲಿ ಅರಸಿ ಕಂಡೆ ನಾನು.