ವಚನ - 936     
 
ಮೋಹಿಸುವಲ್ಲಿ ಮೋಹಿಸದೆ ಇಪ್ಪಾತ ಕಾಮಿಸುವಲ್ಲಿ ಕಾಮಿಸದೆ ಇಪ್ಪಾತ ಆತನಿಪ್ಪೆಡೆಯಲ್ಲಿ ಇರದೆ ಇಪ್ಪಾತ ಆತನು ವಾಙ್ಮನಕ್ಕಗೋಚರನೆಂಬೆ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನೀ ಸಾಕ್ಷಿಯಾಗಿ ನೀನೆಂಬೆ.