ವಚನ - 954     
 
ರೂಢಿಯರಿಯಲ್ಕೆ ಗಾಡಿಗನೆಂಬುದ ನಾ ಬಲ್ಲೆ, ಎನ್ನವರು ಬಲ್ಲರು. ನಿನ್ನನೇನ ಬೇಡಿಹರೆಲೆ ಅಯ್ಯಾ. ನೀ ಕೂರ್ತು ಕೊಡುವ ಸ್ವರ್ಗವನೊಲ್ಲರು ನಿನ್ನಲುಳ್ಳ ಫಲಪದಾದಿಗಳನೆನ್ನವರೊಲ್ಲರು. ಬೇಡಿ ಅರ್ಥಿಸುವುದಾದಡೆ ಹುಸಿ ; ಕೊಡು ಕೊಡದೆ ಮಾಣು. ಬೇಡುವ ಹೀನ ನಿನಗಲ್ಲದೆ ಎನ್ನವರಿಗುಂಟೆ? ಕಪಿಲಸಿದ್ಧಮಲ್ಲಿಕಾರ್ಜುನ.