Index   ವಚನ - 963    Search  
 
ಲಿಂಗವಿಚಾರ, ಜಂಗಮವಿಚಾರ, ಪಾದೋದಕವಿಚಾರ ಬಹು ಸೂಕ್ಷ್ಮ ಕೇಳಯ್ಯಾ. ಮೊದಲನೆಯ ಪಾದೋದಕ ಗುರುಸಂಬಂಧ; ಎರಡನೆಯ ಪಾದೋದಕ ಲಿಂಗ ಸಂಬಂಧ; ಮೂರನೆಯ ಪಾದೋದಕ ಜಂಗಮ ಸಂಬಂಧ. ಈ ತ್ರಿವಿಧೋದಕ ಭಕ್ತನಲ್ಲಿ ಸಂಬಂಧ. ಈ ತ್ರಿವಿಧೋದಕ ಗುರು-ಲಿಂಗ-ಜಂಗಮದಲ್ಲಿ ಸಂಬಂಧ. ಅದು ಕಾರಣ, ಭಕ್ತ-ಮಹೇಶ-ಪಾದೋದಕ, ಪ್ರಸಾದದಲ್ಲಿ ಭೇದವ ಮಾಡಿ ನಿಂದಡೆ, ಅಘೋರನರಕದಲ್ಲಿಕ್ಕುವ ಕಪಿಲಸಿದ್ಧಮಲ್ಲಿಕಾರ್ಜುನ.