ವಚನ - 964     
 
ಲಿಂಗಾಂಗ ಒಂದಾದ ಬಳಿಕ ಭಕ್ತನ ನೋಡಲಿಲ್ಲ. ಲಿಂಗಾಂಗ ಒಂದಾದ ಬಳಿಕ ಜಂಗಮವ ನೋಡಲಿಲ್ಲ. ಲಿಂಗಾಂಗ ಒಂದಾದ ಬಳಿಕ ಏನೆಂದರಿಯಲಿಲ್ಲವು ನೋಡಯ್ಯಾ. ಎಮ್ಮಯ್ಯ ಕಪಿಲಸಿದ್ಧಮಲ್ಲಯ್ಯ ಎಲ್ಲರಲ್ಲಿಯೂ!