ವೃಕ್ಷ-ಬೀಜದಂತೆ ಇಪ್ಪೆ ನೀನು ಅಯ್ಯಾ,
ಅಯ್ಯಾ, ನಿರಾಕಾರದೊಳಗೆ ಮೂರ್ತಿ
ಮೂರ್ತಿಯೊಳಗೆ ನಿರಾಕಾರ ನೀನು.
ಅಯ್ಯಾ, ಮೂರ್ತಿ ಮೂರ್ತಿಗಳನೆ
ತೋರಿ ಆಡಿ ಬಯಲಲಿಪ್ಪೆಯೈ,
ಎನ್ನ ಕಪಿಲಸಿದ್ಧಮಲ್ಲೇಶ್ವರದೇವಾ.
Art
Manuscript
Music
Courtesy:
Transliteration
Vr̥kṣa-bījadante ippe nīnu ayyā,
ayya, nirākāradoḷage mūrti
mūrtiyoḷage nirākāra nīnu.
Ayya, mūrti mūrtigaḷane
tōri āḍi bayalalippeyai,
enna kapilasid'dhamallēśvaradēvā.