ವಚನ - 1008     
 
ಶುದ್ಧ ಪದ್ಮಾಸನದೊಳು ಕುಳ್ಳಿರ್ದು ಅರ್ಧೋದಯವನೆತ್ತುತೈದಾನೆ, ಹೊದ್ದಿರ್ದ ಪ್ರಪಂಚುಗಳನೆಲ್ಲವ ಸುಟ್ಟು ಅರ್ಧೋದಯವನೆತ್ತುತ್ತೈದಾನೆ, ಅರ್ಧೋದಯಾಗ್ನಿ ಶುಚಿ ತನ್ನ ಪ್ರವೇಶಿಸಲು ಮುಗ್ಧತ್ವ ಹೋಯಿತ್ತು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ.