ವಚನ - 1020     
 
ಷಡುಸ್ಥಳ ಸಮನಿಸದಯ್ಯಾ ಎಲ್ಲರಿಗೆ. ಷಡುವ್ರತ ಸಮನಿಸದಯ್ಯಾ ಎಲ್ಲರಿಗೆ. ಅರಿದರಿದು ಗುರುಭಕ್ತಿ, ಅರಿದರಿದು ಲಿಂಗಭಕ್ತಿ ಅರಿದರಿದು ಜಂಗಮಭಕ್ತಿ. ಅರಿದಯ್ಯಾ, ಸುಲಭವೆ ಎಲ್ಲರಿಗೆ? ಅವ್ಯಯ ಕರುಣ ಅಳವಟ್ಟವರಿಗಲ್ಲದೆ ಗುರು-ಚರ-ಇಷ್ಟತ್ರಯ ಅಳವಡದು. ವ್ರತವಾರರಲ್ಲಿ ನಿಪುಣತೆಯಯ್ಯಾ. ನಿನ್ನ ಕೃಪೆ ಎತ್ತಾನೊಬ್ಬರಿಗಲ್ಲವೆ, ಕಪಿಲಸಿದ್ಧಮಲ್ಲಿಕಾರ್ಜುನಾ.