ವಚನ - 1039     
 
ಸಂಸಾರವೆಂಬ ಸಾಗರಕ್ಕೆ ಒಡಲೆಂಬುದೊಂದು ಭೈತ್ರ ಕಂಡಾ. ಪುಣ್ಯಪಾಪವೆಂಬ ಭಂಡವನೆ ತುಂಬಿ ಪಂಚ ಪಂಚೈವರು ಏರಿದರು. ಜ್ಞಾನವೆಂಬ ಕೂಕಂಬೆಯ ಲಿಂಗವೆಂಬ ತಾರಾಮಂಡಲವ ನೋಡಿ ನಡಸೂದು. ಜವನ ಕಳ್ಳಾಳು ಕರ ಹಿರಿದು ಕಂಡಾ. ಪುಣ್ಯಪಾಪವೆಂಬ ಭಂಡವ ಸಮಜೋಗವೆಂಬ ನೇಣ ನವನಾಳದಲಿ ಕಟ್ಟಿ, ಮನವೆಂಬ ಉಪಾಯವನು ವಾಹಿಕೊಳಲಿ ನಿಧಿಯೆಂಬ ನಡುಗಡಲ ಸುಖದುಃಖದೊಳಗೆ ತೆರೆಯ ಹೊಯಿಲು ಕರ ಹಿರಿದು ಕಂಡಾ. ಉದುಮದವೆಂಬಾ ಸುಳಿಯಲ್ಲಿತಿರುಗದೆ ಗುರುವೆಂಬ ಬೆಂಗುಂಡ ಹಿಡಿ ಕಂಡಾ. ಇಹಲೋಕ ಪರಲೋಕ ವಿಘ್ನಗಳ ಕಳೆದು ಕಪಿಲಸಿದ್ಧಮಲ್ಲಿನಾಥನ ಕಾಬೆ ಕಂಡಾ