Index   ವಚನ - 1044    Search  
 
ಸಕಲ ಶ್ರುತಿಗಳು ನಿನ್ನ ಅನುಮಿಸಿದ ವಾಸನೆಗೆ ಮುಸುಕಲಮ್ಮದೆ ತೊಲಗಿ ಹೊಗಳುತಿರಲು, ನಾನೆ ಅಭೇದ್ಯಯೆಂದು ಹೊಗಳುವ ವೇದ ಸಮತೆ ಸಾಯುಜ್ಯದಲಿ ದೀಕ್ಷೆಯವಕೆ. ದೃಷ್ಟವಪ್ಪವ ನೀನು ಶ್ರುತವೆಂದು ಹೇಳುವೆ, ಅತಿಶಯದ ಶ್ರುತ ದೃಷ್ಟಕೆ ಒಡೆಯನಾದವನೆ ಹದುಳದಿಂದರ್ಚಿಸಾ ಸಮತೆ ಪದವಾ. ಸಮತೆ ಸಜ್ಜನರೊಂದು ನೆನಹಿನಲಿ ಮೂರ್ತಿಯೈ, ಕರುಣ ವಾರುಧಿಗಳದರ ಕೆಲಬಲದಲಿ. ಕರುಣಾಕರನು ಕಪಿಲಸಿದ್ಧಮಲ್ಲೇಶ್ವರನು ಸಮತೆ ಸಂಯೋಗದಲಿ ಸುಖಿಯಾದನು.