Index   ವಚನ - 1045    Search  
 
ಸಕಲಾಗಮಸಾರ ನುಡಿಯಲ್ಲಿ ನಿಸ್ಸಾರ ಶಂಕೆ ಸಂಭವ ಎನ್ನ ದುರಾತ್ಮನಲ್ಲಿ; ಅದೇನೆಂದಡೆ ಪಾಪದ ಬಲೆಯಿಂದಾಗಲಿ ಮತ್ತಾವ ನಿಮಿತ್ತದಿಂದಾಗಲಿ, ಘ್ರಾಣವಿಲ್ಲದವರ ಲಕ್ಷವೆಂತು ಕಪಿಲಸಿದ್ಧಮಲ್ಲಿಕಾರ್ಜುನ ತಂದೆ?