Index   ವಚನ - 1049    Search  
 
ಸಜ್ಜನದಲ್ಲಿ ಸದಾಚಾರ ಸಮನಿಸಬೇಕಾಯಿತ್ತಾದರೆ ಲಿಂಗತ್ರಯದ ನೆಲೆಯನರಿ, ಪಾದೋದಕ ಬ್ರಹ್ಮದ ಪ್ರಮಾಣವನರಿ, ಮಜ್ಜನಕ್ಕೆರೆವ ಭೇದವನರಿ, ಅಲ್ಲದಿದ್ದಡೆ ನಿನಗನಿಮಿಷತ್ವವನರಿ. ಅರಿಯದಿದ್ದರೆ ಅಭ್ಯಾಸದಲ್ಲಿ ಎಲ್ಲರಂತಪ್ಪೆ, ಕಪಿಲಸಿದ್ಧಮಲ್ಲಿಕಾರ್ಜುನನಿಪ್ಪಿರವ ಕಾಣೆ.