ವಚನ - 1053     
 
ಸತ್ಯವ ನುಡಿದೆವೆಂದೆಂಬಿರಿ ಸತ್ಯ ನಿಮಗೆಲ್ಲರಿಗೆ ಸುಲಭವೆ? ಅದೇನು ಕಾರಣ ಸುಲಭವಲ್ಲ? ಸತ್ತಿಹಿರಾಗಿ, ಸತ್ಯವ ನುಡಿದವರಿಗೆ ಸಾವುಂಟೆ? ಸತ್ಯವ ನುಡಿವಲ್ಲಿ ಸಂದಿಲ್ಲದಿಪ್ಪ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಹುಸಿಗೆ ಹುರುಡಿಗನು.