Index   ವಚನ - 1079    Search  
 
ಸೀಮೆಯುಳ್ಳನ್ನಬರ ತಾನು ತನ್ನಂಗವಾಗಿರಬೇಕು, ಅನ್ಯಂಗವಾಗದೆ. ಅನ್ಯಂಗ ಅನ್ಯಂಗವೆ? ಗುರುಕರುಣದಿಂದ ತನ್ನಂಗ ಅನ್ಯಂಗವಾದಡೆ ಸೀಮೆಯ ಸಂಬಂಧಿ ತಾನಲ್ಲ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನಲ್ಲಿ ಅಚ್ಚ ಶರಣನು.