ವಚನ - 1086     
 
ಸುಗತಿಯೆಂಬ ಪಟ್ಟಣದಲ್ಲಿ ನಿತ್ಯರೆಂಬ ತಾಳತ್ರಯದೊಳಗೆ ಆರರ ಗೀತವ ತಪ್ಪದೆ ಹಾಡುತ್ತಲಿ, ಮೂವತ್ತಾರು ರೂಪುಗಳೆಂಬವನೆ ಮೀರಿ, ಈ ಮೂವತ್ತಾರರಲ್ಲಿ ಜವನಿಕೆಯುಡುಗೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನೀ ಕೊಡುವುದಕ್ಕೆ ಏನೂ ಇಲ್ಲದಿರೆ ನಿನ್ನನೆ ಒಚ್ಚತಗೊಟ್ಟಡೆ ನಾ ಕರ ಬೆರಗಾದೆನು.