Index   ವಚನ - 1095    Search  
 
ಸೇವ್ಯನಾಗಿ ಸ್ವಯವಾದೆ, ಸಂಗಿಯಾಗಿ ನಿಸ್ಸಂಗಿಯಾದೆ. ಆನಂದನಾಗಿ ಅನಾಮಯನಾದೆ. ಸರ್ವದೊಳಗಾಡಿ ಸಾದಾಖ್ಯತತ್ತ್ವವ ಮೀರಿದೆ. ಕಪಿಲಸಿದ್ಧಮಲ್ಲಿಕಾರ್ಜುನಲಿಂಗಾ, ನಿಜಸ್ವರೂಪವನರುಹಿ ಎನಗೆ ಚುಳುಕಾದೆ.