Index   ವಚನ - 1097    Search  
 
ಸೋಂಕಿನ ಸುಖ ಮೊದಲಾದವನೆಲ್ಲವನು ಚರಲಿಂಗಕ್ಕರ್ಪಿಸುವೆ. ಆ ಅರ್ಪಿತಮುಖದಲ್ಲಿ ಇಷ್ಟಲಿಂಗವನರಿಯದೆ ಚರಲಿಂಗಕ್ಕರ್ಪಿಸುವೆ. ಆ ಚರಲಿಂಗಕ್ಕರ್ಪಿಸಿ ಮಿಕ್ಕ ಶೇಷವನು ಇಷ್ಟಲಿಂಗಕ್ಕೆ ಓಗರವಾಗಿ ನೀಡಿ, ಪ್ರಸಾದವಾಗಿ ಕೈಕೊಂಬೆ, ಕಪಿಲಸಿದ್ಧಮಲ್ಲಿಕಾರ್ಜುನಾ.