•  
  •  
  •  
  •  
Index   ವಚನ - 1100    Search  
 
ಸ್ಥಳವೊಂದರಲ್ಲಿ ಕೂಪಂಗಳು ಹಲವಾಗಿ ಭವಿಸುತ್ತೈದಾವೆ. ಮೊದಲಲ್ಲಿ ಮೂರು, ಅಂತರದಲ್ಲಿ ಆರು, ಪರಸ್ಥಾನದಲ್ಲಿ ಒಂಬತ್ತು. ವೈನೈಯೆಂಬ ಅಕ್ಷರದ ಮೊದಲ ಬಹುಶ್ರುತವಪ್ಪ ಕಮಲ ವಿಚಿತ್ರಾಂದೋಳನೆಂಬ ಭ್ರಮರ ಪರಿಮಳವ ಸೂಸಿ ಬೀಸರವೋಗಲೀಯದೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯಗೆ ಸರ್ವಸ್ವವನರ್ಪಿಸಿ ಸುಖಿಯಾಯಿತು.
Transliteration Sthaḷada kūpaṅgaḷu halavāgi bhavisuttaidāve. Modalu mūru, antaradalli āru, parasthānadalli ombattu. Vainaiyemba akṣarada modala bahuśrutavappa kamala vicitrāndōḷanemba bhramara parimaḷava sūsi bīsaravogalīyade kapilasid'dhamallikārjunayyage sarvasvavanarpisi sukhiyāyitu.