ವಚನ - 1101     
 
ಸ್ತ್ರೀಯರ ಮೂವರ ಮುಂದುಗೆಡಿಸಿತ್ತು ಮೋಹ, ಅರಿಯರವ್ವಾ, ತಾವೊಂದು ದೇಹವುಂಟೆಂದೆಂಬುದ. ಅರಿಯರವ್ವಾ ತಾವೊಂದು ರೂಪುಂಟೆಂದೆಂಬುದ. ತ್ರಿಗುಣಾತ್ಮಕವೇ ರೂಪಾಗಿ, ರೂಪು ಅರೂಪಾದಡೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ನೆರೆವ ನೆನಹಿನಲ್ಲಿ ಲೀಯವಾದರು.