ವಚನ - 1105     
 
ಸ್ಫಟಿಕದ ಘಟದಲ್ಲಿ ಶಿಶು ಪ್ರಾಣವನು ಹಡೆಯೆ ನಿಟಿಲಾಕ್ಷ ನೋಡಿ ತಾ ನಗುತಿರ್ದನು. ಘಟ ಭಿನ್ನವಾಗದೆ ಅಕ್ಷರದ್ವಯದಲ್ಲಿ ತನು ತಾನೆ ಕಪಿಲಸಿದ್ಧಮಲ್ಲಿಕಾರ್ಜುನಾ.