•  
  •  
  •  
  •  
Index   ವಚನ - 1104    Search  
 
ಸ್ಫಟಿಕದ ಘಟದಲ್ಲಿ ಭೇದಿಸುವ ಮಹಾಪ್ರಭೆಯ ಸಾರೋನ್ನತಿ ಹೇಗೆಂದಡೆ: ಇತ್ತೆರನಾಗಿ ಇಬ್ಬರಲ್ಲಿ ಭವಿಸಿ ಇಹಪರವೆಂಬ ಇದ್ದೆಸೆಗಿದ್ದೆಸೆಯಾಗಿ ಇಪ್ಪೆ ಎಲೆಯಯ್ಯಾ. ನಿನ್ನ ಪರಿಯನು ಅರಿಯಬಹುದೆ? ಮಲಭಾಂಡದೇಹಿಗಳಿಗೆ. ಸಂಗಸುಖದಲ್ಲಿ ಸಂಗಿಸುವ ಕ್ರೀಯನರಿಯದೆ ರುಚಿಸುವ ಅಜ್ಞಾನ ಜಡರುಗಳಿಗೆ ಎಂತಪ್ಪುದಯ್ಯಾ. ಅಜ್ಞಾನಜಡರಿಗೆ ನಿಜಶಕ್ತಿ ನಿಜಜಂಗಮ ನಿಜಪ್ರಸಾದ? ಮಹಾನುಭಾವರಿಗಲ್ಲದೆ ನಿಮ್ಮ ಸಂಗ ಸಮನಿಸದು, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sphaṭikada ghaṭadalli bhēdisuva mahāprabheya sārōnnati hēgendaḍe: Itteranāgi ibbaralli bhāvisi ihaparavemba iddesegiddeseyāgi ippe eleyayya. Ninna pariyanu ariyabahude? Malabhāṇḍadēhigaḷige. Saṅgasukhadalli saṅgisuva kriyānariyade rucisuva jñāna jaḍarugaḷige entappudayyā. Ajñānajaḍarige nijaśakti nijajaṅgama nijaprasāda? Mahānubhāvarigallade nim'ma saṅga samanisadu, kapilasid'dhamallikārjunā.