ವಚನ - 1123     
 
ಹಲಬರಿಗೆಳೆಯ ನೀನು, ಮೂವರಿಗೆ ಮುಗ್ಧ ನೀನು, ನಿನ್ನನರ್ಚಿಸುವ ಪರಿಯೆಂತಯ್ಯಾ? ಅಳಿದುಳುಕದಾ ಕಮಳ ಘನತರದಲಳವಟ್ಟು ತನು ನಿನಗೆ ನೈವೇದ್ಯ ಕಪಿಲಸಿದ್ಧಮಲ್ಲಿಕಾರ್ಜುನಾ.