ವಚನ - 1129     
 
ಹಾಡಿ ಹಂಬಲಿಸಿದೆನಯ್ಯಾ, ಅಯ್ಯಾ, ನಿಮ್ಮ ಬೇಡಿ ಬೇಡಿ ಬಾಯಿ ಬೋಡಾದೆನಯ್ಯಾ. ನುಡಿಗೆಟ್ಟ ಬ್ರಹ್ಮದಲ್ಲಿ ನಡೆದೆನೆಂದರೆ ಎನ್ನ ಒಡಲ ಆಮಿಷ ಕಾಡುತ್ತಲಿದೆ. ಮೃಡನೇ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಬೇಕು ಬೇಡೆಂಬುದ ಕಳೆಯಯ್ಯಾ.