Index   ವಚನ - 1139    Search  
 
ಹಿರಣ್ಯವೆಂದು ಮನ ವೇಧಿಸಿ ಕೈಯಾಂತರೆ ಅಯ್ಯಾ ನಿಮ್ಮಾಣೆ, ನಿಮ್ಮ ಪ್ರಸಾದಕಲ್ಲದೆ ಕೈಯಾನೆನಯ್ಯಾ. ಅಯ್ಯಾ, ನಿಮ್ಮ ಪಾದೋದಕವಲ್ಲದೆ ಬೇರೆ ಕೊಳ್ಳೆನಯ್ಯಾ. ನಿಮ್ಮಾಳು ಹೆರರ ಹಾರಿದರೆ ಕರೆದು ಬಾ ಎನ್ನಾ ಕಪಿಲಸಿದ್ಧಮಲ್ಲಿನಾಥಾ ನಿನ್ನ.