•  
  •  
  •  
  •  
Index   ವಚನ - 1138    Search  
 
ಹಿರಣ್ಯದಿಚ್ಛೆಯಲಿ ಹೆಚ್ಚಿ ನುಡಿವರು ನಿನ್ನಂಗವಪ್ಪರೆ ಅಯ್ಯಾ? ಅಪ್ಪರಪ್ಪರು ಹೊನ್ನು ಹೆಣ್ಣು ಮಣ್ಣು ತ್ರಿವಿಧವ ಬಿಟ್ಟವರು. ಅಪ್ಪರಪ್ಪರು ಸತ್ಪಾತ್ರ-ಅಪಾತ್ರವೆಂದರಿದವರು. ಅಪ್ಪರಪ್ಪರು ಸದಾಚಾರ, ನಿಹಿತಾಚಾರ, ಗುರುಚರಭಕ್ತಿ, ಸ್ವಾನುಭಾವದೀಕ್ಷೆ ಸಮನಿಸಿದವರು. ನಿನ್ನಂಗ ಎಲ್ಲರಂತಲ್ಲ ಹೊಸ ಪರಿ ಎಲೆ ಅಯ್ಯಾ. ಮಸ್ತಕದಲ್ಲಿ ಪೂಜೆಯ ಮಾಡಿ ಅದ ನಿರ್ಮಾಲ್ಯವೆಂದು ತ್ಯಜಿಸಿ, ಮರಳಿ ಪಡೆದು ನಿನಗೆ ಪಾತ್ರವಾದರು. ಅಪ್ಪುದಕ್ಕನುಮಾನವೆ? ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Hiraṇyadiccheyali hecci nuḍivaru ninnaṅgavappare ayyā? Apparapparu honnu heṇṇu maṇṇu trividhava biṭṭavaru. Apparapparu satpātra-apātravendaridavaru. Apparapparu sadācāra, nihitācāra, gurucarabhakti, svānubhāvadīkṣe samanisidavaru. Ninnaṅga ellarantalla hosa pari ele ayyā. Mastakadalli pūjeya māḍi ada nirmālyavendu tyajisi, maraḷi paḍedu ninage pātravādaru. Appudakkanumānave? Kapilasid'dhamallikārjunā