ಹೂವರಳೆಯ ಹಾಸಿನ ಮೇಲಿಪ್ಪನು.
ಗಳಗಳನೆ ಹೋಹನು, ಆತುರವೇರಿ ನಿಂದನು ಆತ.
ಅತ್ತಲೂ ಹೋಗಲರಿಯದೆ ಇತ್ತಲೂ ಬರಲರಿಯದೆ
ಅಲ್ಲಿಯೆ ನಿಂದಾತನ ಬರವ ಹಾರುತ್ತಿರ್ದೆನವ್ವಾ!
ಅದೆಂತೆಂದಡೆ:
ಎನ್ನ ಮನಕ್ಕೆ ಬಂದು,
ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡು
ಕೂಡಿದನೆನ್ನ ಕಪಿಲಸಿದ್ಧಮಲ್ಲಿನಾಥಯ್ಯನವ್ವಾ.
Transliteration Hūvaraḷeya hāsina mēlippanu.
Gaḷagaḷane hōhanu, āturavēri nindanu āta.
Attalū hōgalariyade ittalū baralariyade
alliye nindātana barava hāruttirdenavvā!
Adentendaḍe:
Enna manakke bandu,
enna karasthaladalli mūrtigoṇḍu
kūḍidanenna kapilasid'dhamallināthayyanavvā.