•  
  •  
  •  
  •  
Index   ವಚನ - 1142    Search  
 
ಹುಟ್ಟು ಮೆಟ್ಟೆಂಬುದು ನಿಮಗಿಲ್ಲವಯ್ಯಾ; ನಿಮ್ಮಿಂದ ನೀವೆ ಸ್ವಯಂಭುವಯ್ಯಾ. ಇಂತಾದಿರಯ್ಯಾ, ಹರುಷದಿಂದ ನೀವಿಂತಾದಿರಯ್ಯಾ. ನಿಮ್ಮ ಮಹಾತ್ಮೆಯ ನೀವೆ ಬಲ್ಲಿರಯ್ಯಾ, ನಿಜಗುರು ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Huṭṭu meṭṭembudu nimagillavayya; nim'minda nīve svayambhuvayya. Intādirayyā, haruṣadinda nīvintādirayyā. Nim'ma mahātmeya nīve ballirayya, nijaguru kapilasid'dhamallikārjunā.