Index   ವಚನ - 1158    Search  
 
ಹೊಲಬು ಸೀಮೆಯೊಳಗೆ ಹೊಲಬ ಮೀರಿದ ಅಸೀಮ ಕುಲಗೆಟ್ಟ ಸಮತೆ ಸೀಮೆಯ ಸೀಮೆಯಾ. ಈ ದೆಸೆಗೇಡಿ ಸೀಮೆಯನು ವಶಮಾಡಬಲ್ಲಡೆ ಸಮತೆಗಲ್ಲದೆ ಮತ್ತೆ ವೇದ್ಯವಲ್ಲ. ಆನಂದಸ್ಥಾನದಲ್ಲಿ ಸಮತೆ ಸುಮತಿಯ ಭೇದ ಆರೂಢ ಕೂಟ ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿದ ಆನಂದ ದಾರಿ ತಾ ಸಮತೆ ರೂಪ.