ವಚನ - 1175     
 
ವೇಷವ ಧರಿಸಿ ಫಲವೇನಯ್ಯಾ, ವೇಷದಂತಾಚರಣೆ ಇಲ್ಲದನ್ನಕ್ಕ? ವೇದಾಂತವನೋದಿ ಫಲವೇನಯ್ಯಾ, ಬ್ರಹ್ಮ ತಾವಾಗದನ್ನಕ್ಕ? ನಾನಾ ಕೆರೆಯ ತೋಡಿ ಫಲವೇನಯ್ಯಾ, ಪುಣ್ಯತೀರ್ಥಂಗಳು ಬರದನ್ನಕ್ಕ? ಕಪಿಲಸಿದ್ಧಮಲ್ಲಿನಾಥಾ.