ವಚನ - 1190     
 
ಅಯ್ಯಾ, ನಿಮ್ಮ ಕೈ ಬಿರ್ಚಲೊಡನೆ ಬ್ರಹ್ಮಾಂಡಂಗಳು ತಳತಳಿಸುತ್ತವೆ. ಬ್ರಹ್ಮ ಮರೆದನು, ವಿಷ್ಣು ತಾನೊರಗಿದನು, ವೇದಂಗಳು ದೆಸೆದೆಸೆಗೆ ಬಾಯ್ವಿಡಲು, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿಮ್ಮ ಕೈಯ ಶಬ್ದದ ಹವಣಿಂತುಟು.