ವಚನ - 1217     
 
ದುಷ್ಕರ್ಮಂಗಳ ಮಾಡುವರನಂತರುಂಟು, ಸತ್ಕರ್ಮಂಗಳ ಮಾಡುವರೊಬ್ಬರೂ ಇಲ್ಲ ನೋಡಯ್ಯಾ. ದುಷ್ಕರ್ಮವೆಂದಡೆ ವಿಷಯವಾಸನೆ, ಸತ್ಕರ್ಮವೆಂದಡೆ ಕಪಿಲಸಿದ್ಧಮಲ್ಲಿಕಾರ್ಜುನನ ಕೂಡುವ ವಾಸನೆ.