•  
  •  
  •  
  •  
Index   ವಚನ - 1220    Search  
 
ಶ್ರುತಿ ಸ್ಮೃತಿ ಪುರಾಣಾಗಮಮೋಪನಿಷದ್ವಾಕ್ಯಂಗಳನರಿವರಲ್ಲದೆ, ಶ್ರುತ್ಯತೀತಮೂರ್ತಿಯನರಿದವರು ಒಬ್ಬರೂ ಇಲ್ಲ ನೋಡಯ್ಯಾ, `ಸರ್ವಂ ಖಲ್ವಿದಂ ಬ್ರಹ್ಮ' ಎಂದರಿದು ಮತ್ತೇನನರಿಯದೆ ಹೋದೆನಯ್ಯಾ, ನಿಮ್ಮ ಮಹಾಬಯಲಲ್ಲದೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Śruti smr̥ti purāṇāgamamōpaniṣadvākyaṅgaḷanarivarallade, śrutyatītamūrtiyanaridavaru obbarū illa nōḍayya, `sarvaṁ khalvidaṁ brahma' endaridu mattēnanariyade hōdenayyā, nim'ma mahābayalallade kapilasid'dhamallikārjunā.