•  
  •  
  •  
  •  
Index   ವಚನ - 1221    Search  
 
ಲಿಂಗಪೂಜೆಯ ಮಾಡಿ ಲಿಂಗದ ಕರುಣವ ಹಡೆಯಿರೆಂದು ಹೇಳುವರಲ್ಲದೆ, ನೀನಾ ಲಿಂಗವಾಗೆಂದು ಹೇಳುವರಿಲ್ಲ ನೋಡಯ್ಯಾ. ಲಿಂಗ ನೀನೆಂದು ಹೇಳುವರಲ್ಲದೆ, ಲಿಂಗದ ಲೀಲೆಯ ಹೇಳುವರಿಲ್ಲ ನೋಡಯ್ಯಾ. ಲಿಂಗದ ಲೀಲೆಯ ಹೇಳುವರಲ್ಲದೆ, ಲಿಂಗ ತಾನಾದವರಿಲ್ಲ ನೋಡಯ್ಯಾ. ಲಿಂಗ ತಾವಾದವರು ಇಹರಲ್ಲದೆ, ಲಿಂಗ ಶಬ್ದಮುಗ್ಧವಾದವರು ಒಬ್ಬರೂ ಇಲ್ಲ, ಕಪಿಲಸಿದ್ಧಮಲ್ಲಯ್ಯಾ.
Transliteration Liṅgapūjeya māḍi liṅgada karuṇava haḍeyirendu hēḷuvarallade, nīnā liṅgavāgendu hēḷuvarilla nōḍayyā. Liṅga nīnendu hēḷuvarallade, liṅgada līleya hēḷuvarilla nōḍayyā. Liṅgada līleya hēḷuvarallade, liṅga tānādavarilla nōḍayyā. Liṅga tāvādavaru iharallade, liṅga śabdamugdhavādavaru obbarū illa, kapilasid'dhamallayyā.