ವಚನ - 1223     
 
ನಿತ್ಯವೆಂದಡೆ ಲಿಂಗ, ಅನಿತ್ಯವೆಂದಡೆ ಅಂಗ. ನಿತ್ಯವೆಂದಡೆ ಜ್ಞಾನ, ಅನಿತ್ಯವೆಂದಡೆ ಅಜ್ಞಾನ. ನಿತ್ಯ ಕಾರ್ಯವು ಸತ್ಕರ್ಮ, ಅನಿತ್ಯ ಕಾರ್ಯಗಳೆ ವಿಷಯಂಗಳು. ವಿಷಯಂಗಳೆ ನಿತ್ಯಂಗಳಾಗಲು, ಜ್ಞಾನಿಯೆಂದು, ಐಕ್ಯನೆಂದು, ಪ್ರಮಥನೆಂದು, ವೀರಶೈವನೆಂದು, ಕಪಿಲಸಿದ್ಧಮಲ್ಲಿಕಾರ್ಜುನನೆಂದು ಬೇರೆ ಉಂಟೇನೊ, ಹಾವಿನಹಾಳ ಕಲ್ಲಯ್ಯಾ?