ವಚನ - 1222     
 
ಸಿಂಹ ಮದಕರಿಯ ಮೇಲೆ ಹಾರುವುದಲ್ಲದೆ, ಮದಮಹಿಷಿಯ ಮೇಲೆ ಹಾರುವುದೆ ಅಯ್ಯಾ? ಪಕ್ಷಿ ಆಕಾಶದಲ್ಲಿ ಹಾರುವುದಲ್ಲದೆ, ಪಂಜರದಲ್ಲಿ ಹಾರದು ನೋಡಯ್ಯಾ. ನಮ್ಮ ಕಪಿಲಸಿದ್ಧಮಲ್ಲೇಶನನರಿವವರು ಜ್ಞಾನದ ಮೇಲೆ ಹಾರುವರಲ್ಲದೆ ಅಜ್ಞಾನದಲ್ಲಿ ಹಾರರು.