•  
  •  
  •  
  •  
Index   ವಚನ - 1241    Search  
 
ವೇದಪ್ರಿಯನಲ್ಲಯ್ಯಾ ನೀನು: ಶಾಸ್ತ್ರಪ್ರಿಯನಲ್ಲಯ್ಯಾ ನೀನು; ನಾದಪ್ರಿಯನಲ್ಲಯ್ಯಾ ನೀನು; ಸ್ತೋತ್ರಪ್ರಿಯನಲ್ಲಯ್ಯಾ ನೀನು; ಯುಕ್ತಿಪ್ರಿಯನಲ್ಲಯ್ಯಾ ನೀನು; ಮುಕ್ತಿಪ್ರಿಯನಲ್ಲಯ್ಯಾ ನೀನು; ಭಕ್ತಿಪ್ರಿಯನೆಂದು ನಂಬಿದೆ, ಮರೆವೊಕ್ಕೆ ಕಾಯಯ್ಯಾ ನೀನು, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Transliteration Vēdapriyanallayya nīnu: Śāstrapriyanallayya nīnu; nādapriyanallayya nīnu; stōtrapriyanallayya nīnu; yuktipriyanallayya nīnu; muktipriyanallayya nīnu; bhaktipriyanendu nambide, marevokke kāyayya nīnu, kapilasid'dhamallikārjunayya.