Index   ವಚನ - 1240    Search  
 
ಸ್ತೋತ್ರವೆಂಬುದು ನೀನು ಮಾಡಲಾದವು ಕಂಡಯ್ಯಾ. ಮೂರ್ತಿಯೆಂಬುದು ನೀನು ನೆನೆದಡಾದುದು ಕಂಡಯ್ಯಾ. ಆ ಮೂರ್ತಿಯೆಂಬುದು ನಿನ್ನ ಸ್ವಭಾವವು ಕಂಡಯ್ಯಾ. ಎನ್ನ ಹೃತ್ಕಮಲದೊಳಗೆ ಹುಟ್ಟುವ ಸ್ಮರಣೆ ನಿನ್ನ ಗತಿ ನೋಡಯ್ಯಾ. ಕಪಿಲಸಿದ್ಧಮಲ್ಲಿನಾಥಯ್ಯಾ, ಬಾಣ ಮಯೂರ ಹಲಾಯುಧರಿಗೆಂತೊಲಿದೆ ಹೇಳಯ್ಯಾ.