Index   ವಚನ - 1242    Search  
 
ವೇದಪ್ರಿಯನಾದಡೆ ಛಿದ್ರಿಸುವೆಯಾ ಬ್ರಹ್ಮನ ಮಸ್ತಕವ ? ಶಾಸ್ತ್ರಪ್ರಿಯನಾದಡೆ ಒಳಗುಮಾಡುವೆಯಾ ಶಬ್ದಕ್ಕೆ? ಮುಕ್ತಿಪ್ರಿಯನಾದಡೆ ಭವಕ್ಕೆ ತರುವೆಯಾ ಎನ್ನ? ಭಕ್ತಿಪ್ರಿಯನಾದಲ್ಲಿ ಒಯ್ಯಲಿಲ್ಲವೆ ಬೇಡನ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.