Index   ವಚನ - 1249    Search  
 
ತನುವಿದ್ದು ತನುವಿಲ್ಲ, ಮನವಿದ್ದು ಮನವಿಲ್ಲ, ಭಾವವಿದ್ದು ಭಾವವೆಂಬ ಬುದ್ಧಿಯಿಲ್ಲ. ನೀನೆಂಬುದುಂಟಾಗಿ ಭೃತ್ಯಾಚಾರವಿಲ್ಲ, ನಾನೆಂಬುದುಂಟಾಗಿ ಅಹಂಕಾರವಿಲ್ಲ. ಕಪಿಲಸಿದ್ಧಮಲ್ಲಿನಾಥಯ್ಯನಲ್ಲಿ ಲಿಂಗಸಂಗ ನಿರ್ಲೇಪವೆಂಬುದ ಇದಿರಿಂಗೆ ನುಡಿದು ಹೇಳಬಾರದು ಕಾಣಾ, ಚೆನ್ನಬಸವಣ್ಣಾ.