ಎಂದಿಪ್ಪೆನಯ್ಯಾ, ನಿಮ್ಮ ಗಣಂಗಳ ಸಮೂಹದಲ್ಲಿ,
ಎಂದಿಪ್ಪೆನಯ್ಯಾ, ನಿಮ್ಮವರ ನಡುವೆ,
ಎಂದಿಪ್ಪೆನಯ್ಯಾ, ಕೀಳಿಲ ಕಾಯ್ದು,
ಎಂದಿಪ್ಪೆನಯ್ಯಾ, ಕಿಂಕರನಾಗಿ,
ಎಂದಿಪ್ಪೆನಯ್ಯಾ, ನಿಮ್ಮ ನಾಮ ಡಿಂಗರಿಗನಾಗಿ,
ಎಂದಿಪ್ಪೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Endippenayyā, nim'ma gaṇagaḷa samūhadalli,
endippenayyā, nim'mavara naḍuve,
endippenayyā, kīḷila kāydu,
endippenayyā, kiṅkaranāgi,
endippenayyā, nim'ma nāma ḍiṅgariganāgi,
endippenayyā, kapilasid'dhamallikārjunā.