ವಚನ - 1277     
 
ಇನ್ನು ಜನನವು ಇಲ್ಲ ಮುನ್ನವೆ ಸಂದಳಿದೆ ಕಳುಹಿದಂತೆ ಉನ್ನತೋನ್ನತನಾದೆ ಚೆನ್ನಬಸವಣ್ಣನ ಕರುಣದಿಂದೆ ನಿನ್ನ ರೂಪಾದೆ ಇನ್ನೆನಗೆ ಅರಿವುವುಂಟೆ? ಕಪಿಲಸಿದ್ಧಮಲ್ಲಿಕಾರ್ಜುನಾ.