ಮುನ್ನ ಮುನ್ನ-ಶಶಿ ರವಿಗಳಿಲ್ಲದ ಮುನ್ನ,
ಬ್ರಹ್ಮ-ವಿಷ್ಣ್ವಾದಿಗಳುದ್ಭವಿಸದ ಮುನ್ನ ಮುನ್ನ,
ಮೂರ್ತಿಗಳೆಂಟು ಒಂದಾಗದ ಮುನ್ನ,
ತನುಮಧ್ಯವಳಯದಲ್ಲಿ
ಸಕಲ ಬ್ರಹ್ಮಾಂಡ ಜಲಮಯವಾಗಿಪ್ಪಲ್ಲಿ,
ಭಕ್ತಿಕಾರಣ ಬಸವನವಗ್ರಹಿಸಿಪ್ಪಲ್ಲಿ
ಅದೆತ್ತಲಿದ್ದೆ? ಅದ ನೀನೆ ಬಲ್ಲೆಯಯ್ಯಾ!
ಕಪಿಲಸಿದ್ಧಮಲ್ಲಿಕಾರ್ಜುನಯ್ಯ
ಕುರುಹುಗೆಟ್ಟ ನಿಶ್ಚಿಂತನು.