Index   ವಚನ - 1291    Search  
 
ಅರ್ಪಿತ ಅವಧಾನ ಮುಖಂಗಳು ಎಲ್ಲರಿಗೆ ಸುಲಭವೆ, ಅನಾದಿ ಸಂಸಿದ್ಧವಾಗಿ ಬಂದ ಬಸವಣ್ಣಂಗಲ್ಲದೆ? ತ್ರೈಲಿಂಗಮೂಲಕ್ಕೆ ಮಂತ್ರಾದಿರೂಪ ಬಸವಣ್ಣ. ತ್ರೈಲಿಂಗಪ್ರಸಾದಕ್ಕೆ ಅರ್ಹ ಬಸವಣ್ಣ. ಮೂರುಲಿಂಗ ಒಂದಾದ ಮೂರ್ತಿ ಬಸವಣ್ಣ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನೀ ಸಾಕ್ಷಿಯಾಗಿ ಬಸವಣ್ಣನ ನೆನೆವವರು ನೀನಹರು.